ಕರ್ನಾಟಕ ಅಸೆಂಬ್ಲಿಯಲ್ಲಿ ಬಿ ಎಸ್ ವೈ ಮಾಡಿದ ಭಾಷಣದಿಂದ ಆದ ಯಡವಟ್ಟು ಇದು | Oneindia Kannada

2018-05-26 910

BJP Karnataka unit President BS Yeddyurappa speech in floor of house may turn into other angel. During his speech BSY said, our fight is against Appa and Maga (Deve Gowda and HD Kumaraswamy) and not against Congress.

ಒಂದು ವಾರದ ಕೆಳಗೆ ರಾಜೀನಾಮೆ ನೀಡುವ ಮುನ್ನ ಮಾಡಿದ ಭಾಷಣದ ವೇಳೆ ಯಡಿಯೂರಪ್ಪ ಹಲವು ಬಾರಿ ಭಾವೋದ್ವೇಗಕ್ಕೆ ಒಳಗಾಗಿದ್ದರು. ಶುಕ್ರವಾರ (ಮೇ 25) ವಿಶ್ವಾಸ ಗೊತ್ತುವಳಿಯ ವೇಳೆ ಮಾಡಿದ ಬಿಎಸ್ವೈ ಭಾಷಣದಲ್ಲಿ ವ್ಯಂಗ್ಯವೂ ಇತ್ತು, ಪ್ರಖರತೆಯೂ ಇತ್ತು. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಅಪ್ಪಮಗ (ದೇವೇಗೌಡ್ರು, ಕುಮಾರಸ್ವಾಮಿ) ವಿರುದ್ದ ಬಿಎಸ್ವೈ ಕಿಡಿಕಾರುತ್ತಿದ್ದರೇ ಹೊರತು, ಜೆಡಿಎಸ್ ಪಕ್ಷದ ವಿರುದ್ದವಲ್ಲ. ತಮ್ಮ ಪಕ್ಷಕ್ಕೆ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ದವೂ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ ಎಂದರು. ಇಲ್ಲೇ ಯಡಿಯೂರಪ್ಪ ಮಾಡಿಕೊಂಡ ದೊಡ್ಡ ಎಡವಟ್ಟು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.